
02/08/2025
ಮೊದಲಿಗೆ ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ. ಒಮ್ಮೆ ’ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ’ ಎಂಬ ವಿಷಯವಾಗಿ ಬ್ರಹ್ಮ ಮತ್ತು ವಿಷ್ಣುವಿನ ಮಧ್ಯೆ ಸಣ್ಣದಾಗಿ ವಾಗ್ವಾದ ಆರಂಭವಾಯಿತು. ಸಮಯ ಕಳೆದಂತೆ ಅದು ವಿಕೋಪಕ್ಕೆ ತಿರುಗಿ, ಒಬ್ಬರ ಮೇಲೊಬ್ಬರು ಯುದ್ಧ ಸಾರಿದರು. ಪರಸ್ಪರರ ಮೇಲೆ ಆಯುಧಗಳ ಪ್ರಯೋಗಗಳನ್ನೂ ಶುರು ಮಾಡಿದರು. ಇದರಿಂದ ಹಾನಿಗೊಳಗಾದದ್ದು ಮೂರು ಲೋಕಗಳು. ದೇವಾನುದೇವತೆಗಳೂ ಭಯಭೀತರಾದರು....