ಬಲಭಾಗದಲ್ಲಿದ್ದರೆ ಬಲೆಗೆ ಬಿದ್ಹಾಗೆ!

ದಾಸವಾಳ ಹೂವಿನ ಬಗ್ಗೆ ಯಾರಿಗೆ ಗೊತ್ತಿಲ್ಲ? ಎಲ್ಲರ ಮನೆಯಂಗಳದಲ್ಲಿ ಈ ದಾಸವಾಳ ಹೂವಿನ ಗಿಡ ಇದ್ದೇ ಇರುತ್ತೆ. ಏಕೆಂದರೆ ಪ್ರತಿ ಮನೆಯಲ್ಲಿಯೂ ದೇವರ ಪೂಜೆಯಲ್ಲಿ ಈ ದಾಸವಾಳ ಹೂವನ್ನು ಉಪಯೋಗಿಸಿಯೇ ಇರುತ್ತೇವೆ. ಗಣೇಶ ಮತ್ತು ಕಾಳಿ ದೇವತೆಗಳ ಪೂಜೆಯಲ್ಲಿ ದಾಸವಾಳ ಇರಲೇಬೇಕು. ದಾಸವಾಳದ ಔಷಧೀಯ ಗುಣಗಳು! ನೋಡಲು ಸುಂದರವಾಗಿರುವ ಈ ದಾಸವಾಳ ಹೂವುಗಳು ಅಷ್ಟೇ ಔಷಧೀಯ ಗುಣಗಳನ್ನು ಹೊಂದಿವೆ. ದಾಸವಾಳ ಹೂವುಗಳಲ್ಲಿ ಬಿಳಿ ಮತ್ತು ಕೆಂಪು ದಾಸವಾಳಗಳಲ್ಲಿ ಹೆಚ್ಚು ಔಷಧೀಯ ಗುಣಗಳಿರುತ್ತವೆ ಎನ್ನಲಾಗುತ್ತದೆ. ಹೂವಷ್ಟೇ ಅಲ್ಲ, ಬೇರಿನಿಂದ […]

Read More

ಜ್ವರದಿಂದ ಮುಕ್ತಿ ನೀಡುವ ತುಂಬೆ!

ಬಟ್ಟಲು ತುಂಬಾ ತುಂಬಿದ ತುಂಬೆ ಹೂವು ಶಿವನಿಗೆ ತುಂಬ ಇಷ್ಟ. ಏನಿದು ತುಂಬ, ತುಂಬಾ, ತುಂಬೆ? ಹೌದು ಇದು ತುಂಬಾ ಇಂಟರೆಸ್ಟಿಂಗ್ ವಿಚಾರ. ಅರ್ಥವಾಯ್ತು ಬಿಡಿ ಅಂತಿರಾ? ಆಗಲಿ ಬಿಡಿ. ಆದರೂ ಹೇಳ್ತಿನಿ ತುಂಬಾ ಮುಖ್ಯ ವಿಷಯ. ತುಂಬೆ ಹೂವಿನ ವಿಚಾರ! ಹೌದು, ಈವಾರ ಹೇಳ ಹೊರಟಿರುವುದು ತುಂಬೆ ಹೂವಿನ ವಿಚಾರ. ಸಾಮಾನ್ಯವಾಗಿ ಗದ್ದೆ ಮತ್ತು ರಸ್ತೆ ಬದಿಯಲ್ಲಿ, ಉದ್ಯಾನವನ, ಅಷ್ಟೇಕೆ ನಮ್ಮ ಮನೆಯ ಟೆರೇಸಿನ ಮೇಲೆ ಬೆಳೆಯುವ ಚಿಕ್ಕ ಗಿಡವೇ ತುಂಬೆ ಗಿಡ. ಇದು ಎಲ್ಲಾ […]

Read More

ಬಾಳೆ ಹೂವಿ(banana flower)ನಿಂದ ಜೀರ್ಣಕ್ರಿಯೆ ಸರಾಗ!

ಈ ಲೇಖನದಲ್ಲಿ ನಮಗೆಲ್ಲಾ ಪರಿಚಿತವಾಗಿರುವ ಬಾಳೆ ಹೂವಿ( banana flower )ನ ಬಗ್ಗೆ ತಿಳಿಯೋಣ. ಬಾಳೆ ಹೂವುಗಳು ನಮಗೆ ಗೋಚರಿಸುವುದಕ್ಕೂ ಬಹಳ ಹಿಂದೆಯೇ ಬಾಳೆ ಗಿಡದ ಕಾಂಡದೊಳಗೆ ರೂಪುಗೊಳ್ಳುತ್ತವೆ. ನಂತರ ನಿಧಾನವಾಗಿ ಅಂದರೆ ಒಂದೆರಡು ವಾರದೊಳಗೆ ಹೊರ ಬರತೊಡಗುತ್ತವೆ. ಬಾಳೆ ಹೂವು (banana flower) ಗಳು ದೊಡ್ಡದೊಡ್ಡ ಗುಲಾಬಿ ಬಣ್ಣದ ತೊಗಟೆಯ ಒಳಗೆ ಕಂಡು ಬರುತ್ತವೆ. ಇದನ್ನು ಬಾಳೆ ಕುಂಡಿಗೆ ಎಂದು ಕೆಲವು ಕಡೆಗಳಲ್ಲಿ ಕರೆಯುವುದಂಟು. ಕೆಂಪು ಅಥವಾ ಗುಲಾಬಿ ಬಣ್ಣದ ತೊಗಟೆ ಒಳಗೆ ಹೂವುಗಳು ಕೈಗಳು […]

Read More

ಅಗ್ನಿಶಿಖೆ : ಅಮೃತ ಮತ್ತು ವಿಷದ ಸಂಗಮ!

ಈ ವೀಡಿಯೋ ಕೇವಲ ಈ ಹೂವನ್ನು ಪರಿಚಯುಸುವ ಪ್ರಯತ್ನವಷ್ಟೇ. ಮೊದಲೇ ಏಕೆ ಈ ವಿಷಯ ಹೇಳಿದೆವೆಂದರೆ ಇದು ಔಷಧಯುಕ್ತ ವಿಷಕಾರಿ ಹೂವು. ಹೌದು… ಈ ಹೂವು ವಿಷಕಾರಿಯಾದರೂ ಭರಪೂರ ಔಷಧೀಯ ಗುಣಗಳನ್ನು ಒಳಗೊಂಡಿದೆ. ಆಯುರ್ವೇದ ತಜ್ಞರ ಮಾರ್ಗದರ್ಶನವಿಲ್ಲದೆ ಈ ಗಿಡದಿಂದ ತಯಾರಿಸಿದ ಔಷಧಗಳನ್ನು ಸೇವಿಸಿದರೆ ಸಾವು ಖಚಿತ. ಇಂತಹ ವಿಷಕಾರಿ ಹೂವು ಯಾವುದೆಂದಿರಾ? ಅದೇ ಅಗ್ನಿಶಿಖೆ.ತನ್ನ ಸೌಂದರ್ಯದಿಂದಲೇ ಎಲ್ಲರ ಕಣ್ಸೆಳೆಯುವ ಈ ಅಗ್ನಿಶಿಖೆಯ ಮೂಲ ದಕ್ಷಿಣ ಆಫ್ರಿಕಾ. ಆದರೂ ಭಾರತ, ಮಲೆಷಿಯಾ, ಇಂಡೋನೇಷಿಯಾ ರಾಷ್ಟ್ರಗಳಲ್ಲಿ ಇದು ಹೆಚ್ಚಾಗಿ […]

Read More

ನಮಗೆ ತಿಳಿಯದ ಬೌಗೆನ್ವಿಲ್ಲಾ ಹೂವಿನ ರಹಸ್ಯ!

ಹಲ್ಲೋ ಗೆಳೆಯರೇ, ಇವತ್ತು ಮೊದಲಿಗೆ ಒಂದು ಟೀ ಕುಡಿಯೋಣವೇ? ಟೀ ಅಂದ್ರೆ ಮಾಮೂಲಿ ಅಲ್ಲಾ, ಆರೋಗ್ಯಕರವಾದ ಟೀ. ಬೌಗೆನ್ವಿಲ್ಲಾ ಟೀ. ಮೊದಲಿಗೆ ಎರಡು ಕಪ್ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ಹತ್ತರಿಂದ ಹದಿನೈದು ಕೆಂಪು ಬೌಗೆನ್ವಿಲ್ಲಾ ಹೂವುಗಳನ್ನು ಚೆನ್ನಾಗಿ ತೊಳೆದು ಕುದಿಯುವ ನೀರಿಗೆ ಹಾಕಿ. ಜೊತೆಗೆ ಒಂದು ಚೂರು ದಾಲ್ಚಿನ್ನಿ ಚಕ್ಕೆಯನ್ನು ಸಹಾ ಕುದಿಯುವ ನೀರಿಗೆ ಹಾಕಿ. ಸುಮಾರು ಐದು ನಿಮಿಷಗಳ ನಂತರ ಪಾತ್ರೆಯನ್ನು ಇಳಿಸಿ ಚಹಾವನ್ನು ಸೋಸಿ ಒಂದು ಕಪ್‌ಗೆ ಹಾಕಿ. ಅದಕ್ಕೆ ರುಚಿಗೆ […]

Read More

ವಿಶ್ವದ ತುಂಬೆಲ್ಲಾ ಹರಡಿದೆ ನಮ್ಮ ಕೇಪುಳ (red ixora)!

ಈಶ ಗಿರೀಶ ನರೇಶ ಪರೇಶ ಮಹೇಶ ಬಿಲೇಶಯಭೂಷಣ ಭೋ|ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್|| ಆಹಾ… ಶಿವನ ಧ್ಯಾನಿಸುವುದರಲ್ಲಿ ಸಿಗುವ ಆನಂದಕ್ಕೆ ಎಲ್ಲೆಯುಂಟೆ. ಕಣ್ಣುಮುಚ್ಚಿ ಶಿವನನ್ನು ಧ್ಯಾನಿಸಿ, ಕಣ್ಣು ತೆರೆದರೆ ಕೆಂಪು ಹೂವಿನ ರಾಶಿಯಲ್ಲಿ ಶಿವನೂ ತನ್ಮಯತೆಯಿಂದ ಕಣ್ಣು ಮುಚ್ಚಿ ಕೂತಿರಬಹುದೇ ಅನಿಸುತ್ತದೆ. ಶಿವನಿಗೆ ಈ ಹೂವೆಂದರೆ ಅಷ್ಟೊಂದು ಪ್ರಿಯ. ಶಿವನ ಪಾದ ಸೇರಲೆಂದೇ ಬಿಡುವ ಹೂವು ಶಿವನ ಪಾದ ಸೇರಲೆಂದೇ ಬಿಡುವ ಹೂವು ಯಾವುದೆಂದಿರಾ? ಅದೇ ಕೇಪಳ. ಹೌದು, ಗೊಂಚಲು ಗೊಂಚಲಾಗಿರುವ, […]

Read More
error: Content is protected !!