ಭಾರತವೆಂದರೆ ಪ್ರವಾಸಿಗಳಿಗೆ ಸ್ವರ್ಗ. ಜಗತ್ತಿನ ಬಹುತೇಕ ಎಲ್ಲ ದೇಶಗಳಿಂದಲೂ ಭಾರತಕ್ಕೆ ಪ್ರವಾಸಿಗರು ಬರುತ್ತಾರೆ. ಭಾರತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಅದರಲ್ಲೂ ಕಾಶ್ಮೀರ ಪ್ರವಾಸಿಗರ ಸ್ವರ್ಗ ಎಂದೇ ಹೆಸರಾಗಿದೆ. ಇವತ್ತು ಜಮ್ಮು-ಕಾಶ್ಮೀರದ ಒಂದು ವಿಚಿತ್ರ ಜಾಗದ ಬಗ್ಗೆ ತಿಳಿಯೋಣ.
ಮ್ಯಾಗ್ನೆಟಿಕ್ ಹಿಲ್. ಹೌದು, ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಬಂದವರು ಈ ಮ್ಯಾಗ್ನೆಟಿಕ್ ಹಿಲ್ ಕಡೆ ಆಕರ್ಷಿತರಾಗದೇ ಇರುವುದೇ ಇಲ್ಲ. ಅಷ್ಟೊಂದು ಸೆಳೆತ ಈ ಪರ್ವತಕ್ಕೆ.
ಸಮುದ್ರ ಮಟ್ಟದಿಂದ ಹದಿನಾಲ್ಕು ಸಾವಿರ ಅಡಿ ಎತ್ತರದಲ್ಲಿರುವ ಈ ಪರ್ವತ ಜನಾಕರ್ಷಣೆಯ ಕೇಂದ್ರಬಿಂದು. ಲೇಹ್ ಪಟ್ಟಣದಿಂದ ಲೇಹ್-ಕಾರ್ಗಿಲ್-ಬಾಲ್ಕಿಕ್ ಹೆದ್ದಾರಿಯಲ್ಲಿ ಸುಮಾರು ಮೂವತ್ತು ಕಿಲೋಮೀಟರ್ ದೂರ ಕ್ರಮಸಿದರೆ ಸುಂದರ ಹಾಗೂ ಆಕರ್ಷಣೀಯ ಮ್ಯಾಗ್ನೆಟಿಕ್ ಹಿಲ್ ಸಿಗುತ್ತದೆ.
ಇಲ್ಲಿನ ವಿಶೇಷ ಏನು ಅಂತ ತಿಳಿಯಬೇಕಾದರೆ ನೀವು ಯಾವುದಾದರೂ ಒಂದು ವಾಹನದಲ್ಲಿ ಬರಲೇಬೇಕು. ಯಾಕಂತೀರಾ? ವಾಹನ ಚಲಿಸಬೇಕೆಂದರೆ ವಾಹನದ ಇಂಜೀನ್ ಚಾಲೂ ಸ್ಥಿತಿಯಲ್ಲಿರಬೇಕಲ್ಲವೇ? ಆದರೆ ಇಲ್ಲಿ ನೀವು ನಿಮ್ಮ ವಾಹನವನ್ನು ಆಫ್ ಮಾಡಿ, ಬೆಟ್ಟದ ಕಡೆ ಮುಖ ಮಾಡಿ ನಿಲ್ಲಸಿದರೆ ವಾಹನ ತಂತಾನೇ ಬೆಟ್ಟ ಹತ್ತತೊಡಗುತ್ತದೆ. ಗಂಟೆಗೆ ಸುಮಾರು ಇಪ್ಪತ್ತು ಕೀಲೋಮೀಟರ್ ವೇಗದಲ್ಲಿ ನಿಮ್ಮ ವಾಹನ ಚಲಿಸತೊಡಗುತ್ತದೆ. ಹೀಗೂ ಉಂಟೇ ಎಂದು ಆಶ್ಚರ್ಯ ಪಡಬೇಡಿ. ಇದೇ ಈ ಮ್ಯಾಗ್ನೆಟಿಕ್ ಪರ್ವತದ ಚಮತ್ಕಾರಿಕ ಗುಣ. ಕೇವಲ ವಾಹನಗಳಷ್ಟೇ ಅಲ್ಲ, ವಿಮಾನಗಳೂ ಸಹ ಈ ಬೆಟ್ಟದ ಮೇಲೆ ಹಾದು ಹೋಗುವಾಗ ಈ ಬೆಟ್ಟದ ಆಯಸ್ಕಾಂತೀಯ ಗುಣದಿಂದ ತಪ್ಪಿಸಿಕೊಳ್ಳಲಾರವು.
ಇಂತಹ ವಿಶೇಷ ಹಾಗೂ ವಿಚಿತ್ರ ಸ್ಥಳಗಳ ಪರಿಚಯಕ್ಕಾಗಿ ಇನ್ನೊಮ್ಮೆ ಕಾಡುಮಂಜರಿ ವೆಬ್‌ಸೈಟ್‌ಗೆ ಭೇಟಿ ಕೊಡಿ.