ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ಹಾವುಗಳು ಬರುವುದನ್ನು ತಡೆಯುವುದು ಹೇಗೆ?

ಮಳೆಗಾಲ ಬಂತೆಂದರೆ ಸಾಕು, ಮನೆಯ ಸುತ್ತಮುತ್ತ ಓಡಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನೇನು ಕಾಲನ್ನು ಎತ್ತಿ ಇಡಬೇಕು ಎನ್ನುವಷ್ಟರಲ್ಲಿ ಹಾವು ಕಂಡರೆ ಸಾಕು, ಎದೆ ಧಸಕ್ ಎನ್ನುತ್ತದೆಯಲ್ಲವೇ? ಹಾವೊಂದೇ ಅಲ್ಲ, ಕೆಲವೊಂದು ಕ್ರಿಮಿ-ಕೀಟಗಳ ಉಪಟಳವೂ ಸಹ ಮಳೆಗಾಲದಲ್ಲೇ ಹೆಚ್ಚೆನ್ನಬಹುದು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರಂತೂ ಎಷ್ಟೇ ಎಚ್ಚರಿಕೆಯಿಂದಿದ್ದರೂ ಸಾಲದು, ಅಲ್ಲವೇ?

ಹೀಗಾಗಿ ಈ ವೀಡಿಯೋದಲ್ಲಿ ಮನೆಯ ಸುತ್ತಮುತ್ತ ಹಾವು ಹಾಗೂ ಇತರ ಕ್ರಿಮಿಕಿಟಗಳನ್ನು ದೂರವಿಡಲು ಏನು ಮಾಡಬಹುದು ಎನ್ನುವುದನ್ನು ತಿಳಿಯುವ ಪ್ರಯತ್ನ ಮಾಡೊಣ. ಮೊದಲಿಗೆ ಮನೆಯ ಸುತ್ತಮುತ್ತಲ ಪ್ರದೇಶದಲ್ಲಿನ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ಜಜ್ಜಿ ಬರುವ ರಸವನ್ನು ಮನೆಯ ಸುತ್ತ ಸ್ಪ್ರೇ ಮಾಡುವುದರಿಂದ ಹಾವುಗಳನ್ನು ದೂರ ಇಡಬಹುದು. ಲವಂಗ ಮತ್ತು ದಾಲ್ಚಿನ್ನಿ ಎಣ್ಣೆ ಸಹ ಸ್ವಲ್ಪ ಮಟ್ಟಿಗೆ ಹಾವುಗಳನ್ನು ತಡೆಯುತ್ತವೆ.

ಇನ್ನು ಹಾವುಗಳನ್ನು ದೂರವಿಡುವ ಕೆಲವು ಸಸ್ಯಗಳನ್ನು ನೋಡೋಣ. ಮನೆಯ ಸುತ್ತಮುತ್ತ ಚೆಂಡು ಹೂವಿನ ಗಿಡಗಳನ್ನು ನೆಡಬಹುದು. ಚೆಂಡು ಹೂವಿನ ಗಿಡಗಳು ಬೀರುವ ಗಾಢ ಪರಿಮಳಕ್ಕೆ ಹಾವುಗಳು ಹೆದರಿ ಹತ್ತಿರ ಸುಳಿಯಲಾರವು. ಅದೇ ರೀತಿ ಸೇವಂತಿಗೆ ಗಿಡಗಳನ್ನೂ ಸಹ ನೆಡಬಹುದು. ಸೇವಂತಿಗೆ ಗಿಡದಲ್ಲಿರುವ ಪೈರೆಥ್ರಮ್ ಎಂಬ ರಾಸಾಯನಿಕವಿದ್ದು ಇದರಿಂದ ಬರುವ ಸುವಾಸನೆಯನ್ನು ಹಾವುಗಳು ತಡೆಯಲಾರವು. ಮತ್ತೊಂದು ಸಸ್ಯವೆಂದರೆ ಅದು ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲು. ಇದರಲ್ಲಿರುವ ಸಿಟ್ರೊನೆಲ್ಲಾ, ಜೆರೇನಿಯೋಲ್ ಮತ್ತು ಸಿಟ್ರೊನೆಲ್ಲೋಲ್ ರಾಸಾಯನಿಕಗಳು ಸೋಂಕು ನಿವಾರಕಗಳಾಗಿವೆ. ಅಲ್ಲದೆ ಈ ಹುಲ್ಲನ್ನು ಕೀಟನಾಶಕವಾಗಿಯೂ ಬಳಸಲಾಗುತ್ತದೆ. ಇದರಿಂದ ಬರುವ ವಾಸನೆಗೆ ಸಾಮಾನ್ಯವಾಗಿ ಕೀಟಗಳು ಈ ಹುಲ್ಲಿನಿಂದ ದೂರವೇ ಉಳಿಯುತ್ತವೆ. ಹಾಗಾಗಿ ಲೆಮನ್‌ಗ್ರಾಸ್ ಹುಲ್ಲನ್ನು ಬೆಳೆಸುವುದು ಹಾವು ಅಥವಾ ವಿಷಕಾರಿ ಕೀಟಗಳನ್ನು ಮನೆಯಿಂದ ದೂರವಿಡುವಲ್ಲಿ ಪರಿಣಾಮಕಾರಿಯೆನ್ನಬಹುದು. ಪಡುವಲಕಾಯಿ ಬಳ್ಳಿಯಿಂದ ಬರುವ ವಾಸನೆ ಕೂಡ ಹಾವುಗಳನ್ನು ದೂರವಿಡಲು ಸಹಾಯ ಮಾಡುತ್ತವೆ. ಇನ್ನೊಂದು ಅತಿ ಮುಖ್ಯ ಸಸ್ಯವೆಂದರೆ ವರ್ಮ್‌ವುಡ್ ಪ್ಲಾಂಟ್. ಇದರ ವೈಜ್ಞಾನಿಕ ಹೆಸರು ಆರ್ಟೆಮಿಸಿಯಾ ಅಬ್ಸಿಂಥಿಯಮ್. ಸಾಧಾರಣವಾಗಿ ಇದು ಎಲ್ಲ ಕಡೆಯೂ ಬೆಳೆಯುತ್ತದೆ. ಈ ವರ್ಮ್‌ವುಡ್ ಸಸ್ಯವು ಥುಜೋನ್ಸ್ ಎಂಬ ರಾಸಾಯನಿಕವನ್ನು ಹೊಂದಿದೆ. ಇದು ಸ್ವಲ್ಪ ಮಟ್ಟಿಗಿನ ವಿಷವೆಂದೇ ಹೇಳಬಹುದು. ಈ ಗಿಡಗಳನ್ನು ಮುಟ್ಟಿದರೆ ಒಂದು ರೀತಿಯ ಕಹಿ ಹಾಗೂ ಕಮಟು ವಾಸನೆಯನ್ನು ಬೀರುತ್ತವೆ. ಈ ಗಿಡಗಳ ವಾಸನೆ ಹಾವುಗಳನ್ನು ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿ. ಆದರೆ ಚಿಕ್ಕ ಮಕ್ಕಳನ್ನು ಈ ಗಿಡಗಳಿಂದ ದೂರವಿಡಲೇಬೇಕು.

ಇನ್ನು ಹಾವುಗಳನ್ನು ಆಕರ್ಷಿಸುವ ಕೆಲವು ಸಸ್ಯಗಳನ್ನು ನೋಡೋಣ. ಸೀಡರ್ ಟ್ರೀ ಅಥವಾ ದೇವದಾರು ಮರ ಹಾವುಗಳ ನೆಚ್ಚಿನ ಸಸ್ಯವಾಗಿದೆ. ಏಕೆಂದರೆ ಅದರ ಮರವು ಪರಿಮಳಯುಕ್ತ ವಾಸನೆಯನ್ನು ಬೀರುತ್ತದೆ. ಅಲ್ಲದೆ ಈ ದೇವದಾರು ಮರ ಎತ್ತರವಾಗಿ ಬೆಳೆಯುವುದರಿಂದ ಅದರ ಸುತ್ತಮುತ್ತ ನೆರಳು ಮತ್ತು ತೇವಾಂಶ ಹೆಚ್ಚಾಗಿರುತ್ತದೆ. ಅಲ್ಲದೆ ಈ ಮರದ ಕೊಂಬೆಗಳಿಗೆ ಹಾವುಗಳು ಜೋತು ಬೀಳುತ್ತವೆ. ಅಲ್ಲದೆ ನಮ್ಮ ಮನೆಯ ಸುತ್ತಮುತ್ತ ಇರುವ ನಿಂಬೆಹಣ್ಣಿನ ಗಿಡ ಕೂಡ ಹಾವುಗಳನ್ನು ತನ್ನತ್ತ ಆಕರ್ಷಿಸುತ್ತದೆ. ಏಕೆಂದರೆ ನಿಂಬೆ ಹಣ್ಣು ಹಾವಿನ ನೆಚ್ಚಿನ ಆಹಾರದ ಮೂಲವಾಗಿದೆ. ಈ ಕಾರಣಕ್ಕಾಗಿ ನಿಂಬೆಹಣ್ಣಿನ ಗಿಡ ಮನೆಯ ಸುತ್ತಮುತ್ತ ಬೆಳಸುವುದನ್ನು ತಪ್ಪಿಸಿ. ಶ್ರೀಗಂಧದ ಮರ ಕೂಡ ತನ್ನ ಪರಿಮಳದಿಂದಾಗಿ ಹಾವುಗಳನ್ನು ತನ್ನತ್ತ ಸೆಳೆಯುತ್ತದೆ. ಕೊನೆಯದಾಗಿ ನಿಮ್ಮ ಮನೆಯ ಸುತ್ತಮುತ್ತ ಮಳೆಗಾಲದಲ್ಲಿ ಮಲ್ಲಿಗೆ ಗಿಡಗಳನ್ನು ಬೆಳೆಸುವ ಮುನ್ನ ಸ್ವಲ್ಪ ಯೋಚಿಸಲೇಬೇಕು. ಈ ಮಲ್ಲಿಗೆ ಹೂವುಗಳಿಂದ ಬರುವ ಆಹ್ಲಾದಕರ ಪರಿಮಳ ಕೂಡ ಹಾವುಗಳನ್ನು ತನ್ನತ್ತ ಸೆಳೆಯಬಲ್ಲದು. ಅಲ್ಲದೆ ಮಲ್ಲಿಗೆ ಗಿಡ ಪೊದೆಯ ಆಕಾರದಲ್ಲಿರುವುದರಿಂದ ಹಾವುಗಳಿಗೆ ಸುರಕ್ಷಿತ ಅನ್ನಿಸಿದರೆ ಆಶ್ಚರ್ಯವೇನಿಲ್ಲ. ಮಳೆಗಾಲದಲ್ಲಿ ನಿಮ್ಮ ಮಕ್ಕಳನ್ನು ಮಲ್ಲಿಗೆ ಗಿಡಗಳಿಂದ ದೂರವಿಡುವುದು ಒಳ್ಳೆಯದು.

ಎಲ್ಲ ಹಾವುಗಳು ವಿಷಪೂರಿತವಲ್ಲದಿದ್ದರೂ ಅವುಗಳಿಂದ ದೂರವಿರುವುದು ಒಳ್ಳೆಯದು. ಮನೆಯಂಗಳದಲ್ಲಿ ಹೂವಿನ ಸಸ್ಯಗಳನ್ನು ಬೆಳೆಸುವುದು ಒಳ್ಳೆಯದೇ. ಆದರೆ ಮಳೆಗಾಲದಲ್ಲಿ ಯಾವ ಸಸ್ಯಗಳನ್ನು ಬೆಳೆಸಬೇಕು, ಯಾವುದು ಬೇಡ ಎಂದು ಸ್ವಲ್ಪ ಯೋಚಿಸಿ.

Related Posts

  • All Post
  • ಇತರೆ
  • ಎಲೆ
  • ಕಾಯಿ
  • ಪಕ್ಷಿ
  • ಪ್ರಾಣಿ
  • ಬೇರು
  • ಸಸ್ಯ
  • ಹಣ್ಣು
  • ಹಾವು
  • ಹೂವು
ಬಹುಪಯೋಗಿ ಈ ಬಾಳೆ ಹೂವು!

16/07/2025/

ನಾವೆಲ್ಲ ದಿನನಿತ್ಯದ ಜೀವನದಲ್ಲಿ ಬಾಳೆಹಣ್ಣು, ಬಾಳೆ ಎಲೆಗಳನ್ನು ಉಪಯೋಗಿಸಿಯೇ ಇರುತ್ತೇವೆ. ಈ ಲೇಖನದಲ್ಲಿ ಬಾಳೆ ಹೂವಿನ ಬಗ್ಗೆ ವಿವರವಾಗಿ ತಿಳಿಯೋಣ. ಬಾಳೆ...

Leave a Reply

Your email address will not be published. Required fields are marked *

Follow Us

Best Camping Shoes

Popular Posts

Trending Posts

Categories

Tags

Edit Template

Copyright © 2025 Kadumanjari