19.5 C
Bengaluru
Sunday, September 28, 2025
Google search engine
Homeಪ್ರಾಣಿಇಲಿ ಗಣೇಶನ ವಾಹನವಾದುದರ ಹಿಂದಿದೆ ಇಂಟರೆಸ್ಟಿಂಗ್ ಕಥೆ!

ಇಲಿ ಗಣೇಶನ ವಾಹನವಾದುದರ ಹಿಂದಿದೆ ಇಂಟರೆಸ್ಟಿಂಗ್ ಕಥೆ!

ಮೂಷಿಕವಾಹನ ಮೋದಕಹಸ್ತ
ಚಾಮರಕರ್ಣ ವಿಲಮ್ಬಿತಸೂತ್ರ|
ವಾಮನರೂಪ ಮಹೇಶ್ವರಪುತ್ರ
ವಿಘ್ನವಿನಾಯಕ ಪಾದ ನಮಸ್ತೇ||

Thank you for reading this post, don't forget to subscribe!

ಏನಿದು ಗಣೇಶನ ಭಜಿಸಲು ಪ್ರಾರಂಭ ಮಾಡಿದ್ದಾರಲ್ಲ ಅನ್ನುವ ಅನುಮಾನವೇ? ಹೌದು. ಅದಕ್ಕೆ ಕಾರಣವಿದೆ. ಇಲ್ಲಿ ಹೇಳ ಹೊರಟಿರುವುದು ಮೂಷಿಕ ವಾಹನ ಇಲಿಯ ಬಗ್ಗೆ. ಹಿಂದೂ ಪುರಾಣದಲ್ಲಿ ಪ್ರತಿಯೊಂದು ದೇವತೆಗಳಿಗೆ ಒಂದೊಂದು ಪ್ರಾಣಿಗಳನ್ನು ವಾಹನವನ್ನಾಗಿ ಮಾಡಿಕೊಂಡಿವೆ. ಹಾಗೆಯೇ ಗಣೇಶನ ವಾಹನ ಇಲಿ. ಇಲಿ ಗಣೇಶನ ವಾಹನವಾಗಿದ್ದು ಹೇಗೆ? ಇದರ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ.

ಹಿಂದೆ ಗಜಮುಖಾಸುರನೆಂಬ ಬಲಶಾಲಿ ರಾಕ್ಷಸನೊಬ್ಬ ಎಲ್ಲ ದೇವತೆಗಳಿಗೂ ಕಿರುಕುಳ ತೊಂದರೆ ಕೊಡುತ್ತಿದ್ದ. ಗಜಮುಖಾಸುರನ ಕಾಟ ತಾಳಲಾರದೆ ದೇವತೆಗಳೆಲ್ಲ ಒಟ್ಟಾಗಿ ಗಣೇಶನ ಬಳಿ ಬಂದು, ಗಜಮುಖಾಸುರನ ಕಾಟದಿಂದ ಮುಕ್ತಿ ನೀಡುವಂತೆ ಬೇಡಿಕೆ ಇಡುತ್ತಾರೆ. ಹೀಗೆ ಬಂದ ದೇವತೆಗಳನ್ನು ಸಂತೈಸಿದ ಗಣೇಶ, ಗಜಮುಖಾಸುರನಿಂದ ಬಿಡಿಸುವ ಭರವಸೆ ನೀತ್ತಾನೆ. ನಂತರ ಗಣೇಶ ಮತ್ತು ಗಜಮುಖಾಸುರನ ನಡುವೆ ಘೋರ ಯುದ್ಧ ನಡೆಯುತ್ತದೆ. ಈ ಯುದ್ಧದಲ್ಲಿ ಗಣೇಶನ ಒಂದು ಹಲ್ಲು ಮುರಿದು ಹೋಗುತ್ತದೆ. ಇದರಿಂದ ಕೋಪಾವಿಷ್ಠನಾದ ಗಣೇಶ ಗಜಮುಖಾಸುರನನ್ನು ಹೊಡೆಯತೊಡಗುತ್ತಾನೆ. ಹೆದರಿದ ಗಜಮುಖಾಸುರ ಓಡಿಹೋಗಲು ಪ್ರಾರಂಭಿಸಿತ್ತಾನೆ. ಆದರೆ ಗಣೇಶ ಅವನನ್ನು ಹಿಡಿದಾಗ, ಗಜಮುಖಾಸುರ ಪ್ರಾಣಭಯದಿಂದ ಕ್ಷಮೆ ಕೇಳುತ್ತಾನೆ. ಆತನನ್ನು ಕ್ಷಮಿಸಿದ ಗಣೇಶ ಗಜಮುಖಾಸುರನನ್ನು ಇಲಿಯ ರೂಪದಲ್ಲಿ ತನ್ನ ವಾಹನವನ್ನಾಗಿ ಮಾಡಿಕೊಂಡು ತನ್ನ ಹತ್ತಿರವೇ ಇರುವಂತೆ ನೋಡಿಕೊಳ್ಳುತ್ತಾನೆ. ಹೀಗೆ ಪುರಾಣಗಳಲ್ಲಿ ಇಲಿ ಗಣೇಶನ ವಾಹನ ಆದದ್ದರ ಹಿಂದೆ ಅನೇಕ ಕಥೆಗಳಿವೆ.

ಅದಿರಲಿ, ಇಲಿ ಚೂಪಾದ ಮೂತಿ, ಸಣ್ಣ ದುಂಡನೆಯ ಕಿವಿಗಳು, ಮತ್ತು ಒಂದು ಉದ್ದ ಬೆತ್ತಲೆ ಅಥವಾ ಬಹುತೇಕ ಬೋಳು ಬಾಲವನ್ನು ಹೊಂದಿರುವ ಒಂದು ಚಿಕ್ಕ ಸಸ್ತನಿ. ಇವುಗಳು ದಂಶಕ ವರ್ಗಕ್ಕೆ ಸೇರುತ್ತವೆ. ಇಲಿಗಳಲ್ಲಿ ಸುಮಾರು ೩೦೦ರಿಂದ ೪೦೦ ಪ್ರಭೇದಗಳಿವೆ. ಇವುಗಳು ಪ್ರಪಂಚದಾದ್ಯಂತ ಕಂಡು ಬರುವ ಪುರಾತನ ಪ್ರಾಣಿಗಳೆಂದೇ ಹೇಳಬಹುದು. ಇಲಿಗಳಿಲ್ಲದ ಊರಿಲ್ಲವೆಂದೇ ಹೇಳು ತ್ತಾರೆ. ಮೂಲತಃ ಇಲಿಯ ಉಗಮ ಮಧ್ಯ ಏಷ್ಯಾದಲ್ಲಾಗಿರಬಹುದು ಎಂದು ಊಹಿಸಲಾಗಿದೆ.

ಸಾಮಾನ್ಯವಾಗಿ ನಾವು ಮನೆಯಲ್ಲಿ ನೋಡುವ ಇಲಿ ಹೆಚ್ಚು ಪರಿಚಿತವಾದ ಪ್ರಭೇದವೆಂದೇ ಹೇಳಬಹುದು. ಇದೇ ಪ್ರಭೇದದ ಇನ್ನೊಂದು ಸದಸ್ಯ ಎಂದರೆ ಅದು ಹೆಗ್ಗಣ. ಈ ಎರಡೂ ಜಾತಿಯ ಅಂದರೆ ಇಲಿ ಮತ್ತು ಹೆಗ್ಗಣಗಳು ಮನುಷ್ಯರಿಗೆ ತೊಂದರೆ ಕೊಡಲೆಂದೇ ಹುಟ್ಟಿವೆಯೇನೋ ಅನ್ನಿಸಿದರೆ ಆಶ್ಚರ್ಯವೇನೂ ಇಲ್ಲ. ಸಾಮಾನ್ಯವಾಗಿ ಇಲಿಗಳಿಗೆ ಕಾಳುಕಡ್ಡಿಗಳು, ದಿನಸುಗಳು, ತಯಾರಿಸುವ ತಿಂಡಿ ತಿನಿಸುಗಳು ಬಲು ಪ್ರಿಯ. ಅಷ್ಟೇ ಅಲ್ಲದೆ ಮಾನವರ ಬಟ್ಟೆಯನ್ನೂ ಬಿಡಲ್ಲ ಈ ಪ್ರಾಣಿ. ಹೀಗಾಗಿ ಇಲಿಗಳು ಮನುಷ್ಯನ ಶತ್ರುಗಳಲ್ಲಿ ಇಲಿಯೂ ಒಂದೆಂದರೆ ತಪ್ಪಲ್ಲ.

ಇಲಿಗಳು ಬಲು ಚುರುಕು. ಮನುಷ್ಯನ ಹೆಜ್ಜೆ ಸಪ್ಪಳ ಕೇಳಿದರೆ ಸಾಕು, ಕಣ್ಣಿಗೆ ಕಾಣದಂತೆ ಮಾಯವಾಗುತ್ತವೆ. ಉಗ್ರಾಣದ ಮೂಲೆಗಳು, ಸಾಮಾನು ಸರಂಜಾಮುಗಳ ಮಧ್ಯೆ, ಮರದ ಪೊಟರೆ, ನೆಲದಡಿಯ ಬಿಲ ಹೀಗೆ ಇಲಿಗಳು ಎಲ್ಲ ಕಡೆಯೂ ವಾಸಿಸುತ್ತವೆ. ಇವುಗಳ ಸಂಚಾರ ಹೆಚ್ಚಾಗಿ ರಾತ್ರಿಯ ವೇಳೆ. ಜನ ಸಂಚಾರ, ಇತರ ಪ್ರಾಣಿಗಳಿಲ್ಲದ ಸಮಯ ನೋಡಿಕೊಂಡು ತಮ್ಮ ಆಹಾರಕ್ಕಾಗಿ ಹೊರ ಬಂದು ಕಣ್ಣಿಗೆ ಬಿದ್ದ ತಿಂಡಿಯನ್ನು ತಿನ್ನುತ್ತವೆ. ಆಹಾರವನ್ನು ಅಳಿಲಿನಂತೆ ಮುಂಗಾಲುಗಳಲ್ಲಿ ಹಿಡಿದು, ಹಿಂಗಾಲುಗಳ ಮೇಲೆ ಕುಳಿತು ತಿನ್ನುತ್ತವೆ. ಇಲ್ಲಿ ತುಂಬ ಎತ್ತರಕ್ಕೆ ಜಿಗಿಯಲಾರವು. ಆದರೆ ವೇಗವಾಗಿ ಓಡುತ್ತವೆ.

ಇಲಿಗಳ ಜೀವನದ ಬಗೆಗಿನ ಕುತೂಹಲಕಾರಿ ವಿವರಗಳನ್ನು ಮುಂದಿನ ಲೇಖನದಲ್ಲಿ ನೋಡೋಣ. ಕಾಯುತ್ತೀರಲ್ಲವೇ?

RELATED ARTICLES
- Advertisment -
Google search engine

Most Popular

Recent Comments